ನೀಲಿ ಗಗನದ ಅಂಚಲ್ಲಿ, ಮಂದಗಾಳಿಯ ಸೆರಗಲ್ಲಿ
ಮೂಡಣದ ಸೂರ್ಯ ಕರಗಿ ಮರೆಯಾಗುವ ಸಮಯ;
ಸಂಧ್ಯಾರಾಗಕೆ ಮರಗಿಡಗಳು ತಲೆದೂಗಿ
ನಿದ್ರಾದೇವತೆಯ ತೆಕ್ಕೆಯೇರುವ ಮುನ್ನ
ನಿನ್ನ ಮಡಿಲೇರುತ್ತಿದ್ದ ನೆನಪು ಇನ್ನೂ ಕಾಡುತಿಹುದು ನನ್ನ
ಪರದಿಂದಿಳಿದು ಇಳೆಗೆ ಇಳಿದ ದೇವ ಪುತ್ಥಳಿಯೋ
ನನ್ನ ಪಾಲಿನ ದೇವತೆಯೇ ಸರಿ
ನಿನ್ನ ನೆರಳಿಗಾಗಿ, ನಿನ್ನ ಸನಿಹದ ನೆಮ್ಮೆದಿಯ ಅಲೆಗಾಗಿ
ತಹತಹಿಸುವ ಮರಿಚಿಟ್ಟೆಯ ಹಾಗಿದ್ದೆ,
ನಿನ್ನ ಸೆರಗಿನಲ್ಲಿ ಜೋಪಾನವಾಗಿ ಬಚ್ಚಿಟ್ತಿದ್ದೆ ನೀನು;
ಮೇರು ಕ್ಷಿತಿಜದ ಕವಲುಗಳ ಹಾಗೆ
ನಿನ್ನ ಕಬಂಧ ಬಾಹುಗಳಲ್ಲಿ ಶರಣಾಗತಳಾಗಿದ್ದೆ
ಎಷ್ಟೋ ಬವಣೆಗಳ ನಡುವಲ್ಲು ಮಾಸದ ಮೊಗದ ಮಂದಹಾಸ
ಮಹಾನದಿಯ ಮೌನ ಗಾಂಬೀರ್ಯ, ಅಗಾಧ ಆತ್ಮವಿಶ್ವಾಸ
ನಿನ್ನ ಸಹನೆಗೆ, ನಿನ್ನ ಸಹಿಷ್ಣುತೆಗೆ ಸಾಟಿಯುಂಟೆ ಎಲ್ಲೂ
ನನ್ನವ್ವ,
ಇಂದು ನಿನ್ನಿಂದ ಬಹುದೂರ ಹಾರಿರುವೆ
ಬರುವೆನೊಮ್ಮೆ ಬರಿದೆ ಮನದಿ, ನಿನ್ನೊಲವು ತುಂಬೆನ್ನ
ತನುಮನದಿ
ಜಗವನೆದುರಿಸಲು, ನೀ ತೋರಿದ ಪ್ರೀತಿಯ
ಜಗಕೆ ಧಾರೆಯೆರೆಯಲು
ನಿನ್ನ ದಾರಿಯಲ್ಲೇ ನಾ ನಡೆಯಲು..
P.S : This one s for you mom, miss you so very much
Happy Mothers Day!!
- Sh
ಮೂಡಣದ ಸೂರ್ಯ ಕರಗಿ ಮರೆಯಾಗುವ ಸಮಯ;
ಸಂಧ್ಯಾರಾಗಕೆ ಮರಗಿಡಗಳು ತಲೆದೂಗಿ
ನಿದ್ರಾದೇವತೆಯ ತೆಕ್ಕೆಯೇರುವ ಮುನ್ನ
ನಿನ್ನ ಮಡಿಲೇರುತ್ತಿದ್ದ ನೆನಪು ಇನ್ನೂ ಕಾಡುತಿಹುದು ನನ್ನ
ಪರದಿಂದಿಳಿದು ಇಳೆಗೆ ಇಳಿದ ದೇವ ಪುತ್ಥಳಿಯೋ
ನನ್ನ ಪಾಲಿನ ದೇವತೆಯೇ ಸರಿ
ನಿನ್ನ ನೆರಳಿಗಾಗಿ, ನಿನ್ನ ಸನಿಹದ ನೆಮ್ಮೆದಿಯ ಅಲೆಗಾಗಿ
ತಹತಹಿಸುವ ಮರಿಚಿಟ್ಟೆಯ ಹಾಗಿದ್ದೆ,
ನಿನ್ನ ಸೆರಗಿನಲ್ಲಿ ಜೋಪಾನವಾಗಿ ಬಚ್ಚಿಟ್ತಿದ್ದೆ ನೀನು;
ಮೇರು ಕ್ಷಿತಿಜದ ಕವಲುಗಳ ಹಾಗೆ
ನಿನ್ನ ಕಬಂಧ ಬಾಹುಗಳಲ್ಲಿ ಶರಣಾಗತಳಾಗಿದ್ದೆ
ಎಷ್ಟೋ ಬವಣೆಗಳ ನಡುವಲ್ಲು ಮಾಸದ ಮೊಗದ ಮಂದಹಾಸ
ಮಹಾನದಿಯ ಮೌನ ಗಾಂಬೀರ್ಯ, ಅಗಾಧ ಆತ್ಮವಿಶ್ವಾಸ
ನಿನ್ನ ಸಹನೆಗೆ, ನಿನ್ನ ಸಹಿಷ್ಣುತೆಗೆ ಸಾಟಿಯುಂಟೆ ಎಲ್ಲೂ
ನನ್ನವ್ವ,
ಇಂದು ನಿನ್ನಿಂದ ಬಹುದೂರ ಹಾರಿರುವೆ
ಬರುವೆನೊಮ್ಮೆ ಬರಿದೆ ಮನದಿ, ನಿನ್ನೊಲವು ತುಂಬೆನ್ನ
ತನುಮನದಿ
ಜಗವನೆದುರಿಸಲು, ನೀ ತೋರಿದ ಪ್ರೀತಿಯ
ಜಗಕೆ ಧಾರೆಯೆರೆಯಲು
ನಿನ್ನ ದಾರಿಯಲ್ಲೇ ನಾ ನಡೆಯಲು..
P.S : This one s for you mom, miss you so very much
Happy Mothers Day!!
- Sh
Happy Mothers Day, tumbaa kavana chendaagide
ReplyDeleteMany thanks.. sorry for the delay.. I was quite busy and hence only scarcely seen on blog nowadays..
ReplyDeleteDr. Shwetha!!!
ReplyDelete:-)
nice lines
malathi S
Thanks malathi akka..
ReplyDeleteNice lines
ReplyDeleteNimmava,
Raghu.
dhanyavaadagalu.. (pardon me for the delay, I hardly blog these days..)
ReplyDelete