Saturday, 7 August 2010

Bayake!!

ತಿಳಿನೀರ ಕೊಳದೊಳು ಮುದುಡಿದ ತಾವರೆಗೆ
ಸೂರ್ಯನ ಎಳೆಬಿಸಿಲ ಕಾಂತಿಯದು ಸಾಕಲ್ಲವೇ ?
              ಬಯಕೆ ತೋಟದ ಬೇಲಿಯೊಳಗಣ ಹೂವಿಗೆ
              ಜೇನ ಹೀರುವ ದುಂಬಿಯ ಒಲುಮೆಯ ಕರೆಯೊಂದೆ ಸಾಕಲ್ಲವೇ?
ಸೂರ್ಯನ ತೇಜಸ್ಸಿನೂಳು ಕಾದು ನಿಂತ ಇಳೆಗೆ
ಮೊದಲ ಸೋನೆ ಮಳೆಯ ಬಿಸಿ ಅಪ್ಪುಗೆಯೊಂದೆ ಸಾಕಲ್ಲವೇ?
              ಈ ಬಾಳ ಪಯಣದಲಿ ನೀ ಜೊತೆಯಿರುವಾಗ
              ನನಗಿನ್ನೇನು ಬೇಕು? ಓ! ಬಂಧುವೇ !! ನಿನ್ನ ನಗೆಯೊಂದೇ ಸಾಕೆನಗೆ
              ನಿನ್ನದೊಂದು ನಗೆಯೇ ಸಾಕು..
 
My first effort in kannada poetry... I know, it s like a small girl's writing. But, I bet it feels great to get started.. More will follow...

No comments:

Post a Comment